Advertisement

Category: ದಿನದ ಪುಸ್ತಕ

ಸ್ಮಿತಾ ಅಮೃತರಾಜ್‌ ಪುಸ್ತಕಕ್ಕೆ ಜಯಶ್ರೀ ಬಿ  ಕದ್ರಿ ಬರೆದ ಮುನ್ನುಡಿ

ಸ್ಮಿತಾರ ಬರಹಗಳು ಕೆಲವೊಮ್ಮೆ ಅಸಹಾಯಕ ಚಿಟ್ಟೆಯೊಂದರ ಫಡಫಡಿಕೆಯಂತೆ, ಕೆಲವೊಮೆ ನದಿಯ ಜುಳುಹುಳು ನಾದದಂತೆ, ಅಂಗಳದಲ್ಲಿ ಬೇರುಬಿಟ್ಟ ಗಿಡವೊಂದು ಸುಗಂಧ ರೂಪದಲ್ಲಾದರೂ ತನ್ನ ಅಂತಃ ಸತ್ವ ಗಾಳಿಯಲ್ಲಿ ತೇಲಿ ಹೋಗಬೇಕೆಂದು ಹಂಬಲಿಸುವಂತೆ, ಸುಡುಕೆಂಡದಲ್ಲಿ ಅಂತರ್ಗತವಾದ ಕಿಚ್ಚಿನಂತೆ, ಕಿರು ತೊರೆಯೊಂದು ನದಿ ರೂಪದಲ್ಲಿ ಹರಿದು ಸಾಗರ ಸೇರುವೆನೆಂದು ಅಚಲ ವಿಶ್ವಾಸದಲ್ಲಿ ಹರಿಯುವಂತೆ ಒಟ್ಟಂದದಲ್ಲಿ ಹೆಣ್ಣಿನ ಧೀ ಶಕ್ತಿಯ ಸಾಮ್ಯ ರೂಪದಲ್ಲಿ ಇವೆ.
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’ಕ್ಕೆ ಜಯಶ್ರೀ ಬಿ ಕದ್ರಿ ಬರೆದ ಮುನ್ನುಡಿ

Read More

ಆಶಾ ರಘು ಬರೆದ ‘ಮಾಯೆ’ ಕಾದಂಬರಿಯ ತುಣುಕು

ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು. ಅವಕ್ಕೆ ತೆಳುಪರದೆ. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು. ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ಆಶಾ ರಘು ಬರೆದ  ‘ಮಾಯೆ’ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆಯ ಓದುಗರಿಗಾಗಿ ಇಲ್ಲಿದೆ.

Read More

ಸು.ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.  ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. -ಸು.ರುದ್ರಮೂರ್ತಿ ಶಾಸ್ತ್ರಿಗಳು  ಬರೆದ ‘ಅಕ್ಕಮಹಾದೇವಿ’ ಹೊಸ ಕಾದಂಬರಿಯ ಒಂದು ಅಧ್ಯಾಯ ಇಲ್ಲಿದೆ. 

Read More

ವಾಸುದೇವ ನಾಡಿಗ್ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ.
ವಾಸುದೇವ ನಾಡಿಗ್‌ ಬರೆದ ‘ಬಂದರಿಗೆ ಬಂದ ಹಡಗು’ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ಪ್ರೊಫೆಸರ್ ಶಂಭು ಮಹಾಜನ್ ರವರ ಮಂಗಳೂರು ಉಪನ್ಯಾಸವು

ಕಂಪ್ಯೂಟರ್ ಗೆ ಕನ್ನಡ ಕಲಿಸಿದವರೆಂದೇ ಪ್ರಖ್ಯಾತರಾದ ಹಿರಿಯ ವಿದ್ವಾಂಸ ಕೆ.ಪಿ.ರಾವ್ ಅವರು ‘ವರ್ಣಕ’ ಎಂಬ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ. ಇದರ ಕಥಾ ನಾಯಕ ಪ್ರೊ.ಶಂಭು ಮಹಾಜನ್ ಅವರು ನಡೆಸುವ ಭಾಷಾಜ್ಞಾನದ ಅನ್ವೇಷಣೆಯೇ ಕಾದಂಬರಿಯ ಹೂರಣ. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಕುರಿತು ನೀಡುವ ಉಪನ್ಯಾಸವು ಕಾದಂಬರಿಯ ಆತ್ಮವೆಂದೇ ಹೇಳಬಹುದು.ಆ ಉಪನ್ಯಾಸದ ಪೂರ್ಣಪಾಠ ನಿಮ್ಮ ಓದಿಗಾಗಿ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ