ಸಾಧುಸಂತರ ಸಂಗಮದಲ್ಲಿ…..
ಇಂತಹ ಮಹಾಕುಂಭಮೇಳವನ್ನು ಪ್ರತ್ಯಕ್ಷವಾಗಿ ನೋಡಿ ಸಾಕ್ಷಿಯಾಗಿ ಅನುಭವಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅಪರೂಪದ ಘಳಿಗೆ. ಇಲ್ಲಿ ಸಾಧುಗಳ ಸಂಖ್ಯೆ ಹೆಚ್ಚಿದ್ದರೂ ಸಾಧ್ವಿಗಳಿಗೂ ಕೊರತೆಯಿರಲಿಲ್ಲ. ಅಲ್ಲಿದ್ದ ನೂರಾರು ಸಾಧ್ವಿಯರಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರವಚನಕಾರರು. ಜಪಾನಿನ ಯೋಗಮಾತಾ ಕಿಯೋಕೋ ಅಕೀವಾ ಅನ್ನುವ ಸಾಧ್ವಿಯೊಬ್ಬರು ದೀಕ್ಷೆತೊಟ್ಟು ಹಿಂದುಧರ್ಮದ ಅನುಯಾಯಿಯಾಗಿದ್ದು ಅಲ್ಲಿ ವರ್ಲ್ಡ್ ಪೀಸ್ ಕ್ಯಾಂಪೇನ್ ಕ್ಯಾಂಪ್ ಹಾಕಿದ್ದರು. ಆಕೆ ವಿಮೆನ್ ಪವರ್ ಎನ್ನುವ ಪ್ರವಚನದಲ್ಲಿ ಸಿದ್ಧ ಹಸ್ತೆ.
ಅಂಜಲಿ ರಾಮಣ್ಣ ಬರಹ
