Advertisement

Category: ಪ್ರವಾಸ

ನೂರು ಕಲ್ಲುಗಳಲ್ಲಿ ಒಂದು ಮುತ್ತು ಹುಡುಕುವ ಬಿರ್ಜು ಮಹಾರಾಜ್

ಸಿನೆಮಾ ರಂಗಕ್ಕೆ ಹೋಗಬೇಡ ಎಂದ ತಾಯಿಯ ಮಾತನ್ನು ಪಕ್ಕಕ್ಕಿಟ್ಟು ಮುಂಬೈಗೆ ಬಂದಾಗ ಜೇಬಿನಲ್ಲಿ ಕಿರುಗಾಸು ಇಲ್ಲದ ಬಿರ್ಜು ಮಹಾರಾಜ್ ಮಾಧುರಿ ದೀಕ್ಷಿತ್ ರಿಂದ ಹಿಡಿದು  ದೀಪಿಕಾಳವರೆಗೂ ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದರೂ ಪ್ರೀತಿ ಮಾಡುವುದು ಮಾತ್ರ ಕಮಲಹಾಸನ್‌ನನ್ನು. ವಿಶ್ವರೂಪಂ ಸಿನೆಮಾ ಸಮಯದಲ್ಲಿ ‘ಆತ ತರಬೇತಿ ಸಮಯದಲ್ಲಿ ನೃತ್ಯ ಮಾಡುತ್ತಿದ್ದನ್ನು ನೋಡಿ ಎಷ್ಟೋ ಬಾರಿ ನಾನೇ ನರ್ತಿಸುತ್ತಿದ್ದೇನೆ ಎನ್ನಿಸಿಬಿಡುತ್ತಿತ್ತು’ ಎನ್ನುವಾಗ ಬಿರ್ಜು ಅವರ ಉಸಿರಿನಲ್ಲಿ ಜೀವ ಆಡಿದಂತೆನಿಸಿತು.

Read More

ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ ಇಂದು ಆರಂಭ

ಸದಾ ಹೊಸ ನೋಟವನ್ನು ಕೊಡುವ ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಬೆಟ್ಟಗಳನ್ನು ಏರುವುದು, ಹೊಸ ಜನರ ಭೇಟಿ ಮಾಡುವುದು,  ವಿವಿಧ ಪ್ರದೇಶಗಳ ಹಿನ್ನೆಲೆ ಅರಿಯುವುದೆಂದರೆ ಅಂಜಲಿ ರಾಮಣ್ಣ ಅವರಿಗಿಷ್ಟ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳಾ ಹಕ್ಕುಗಳ ಬಗ್ಗೆ ನಿಖರವಾದ ನಿಲುವುಗಳನ್ನು ಹೇಳಬಲ್ಲ ಅವರು, ತಮ್ಮ ಸೂಕ್ಷ್ಮ ಒಳನೋಟಗಳನ್ನು ‘ಫ್ಯಾಮಿಲಿ ಕೋರ್ಟ್ ಕಲಿಕೆ’ ಎಂಬ ಶೀರ್ಷಿಕೆಯಡಿ ಮಂಡಿಸುವುದುಂಟು. 

Read More

ಮಥುರಾ ನಗರಿಯಲ್ಲೊಂದು ಭಾವಯಾನ

ವ್ರಜ ಪರಿಕ್ರಮದಲ್ಲಿ ದೀರ್ಘ ಮತ್ತು ಚುಟುಕಾದ ಎರಡು ರೀತಿಯ ಪರಿಕ್ರಮಗಳಿವೆ. ಚಿಕ್ಕಮಟ್ಟದ ಪರಿಕ್ರಮದಲ್ಲಿ ಮಥುರೆಯ ಮುಖ್ಯ ದೇಗುಲ ಮತ್ತು ಪುಣ್ಯಸ್ಥಾನಗಳಿಗೆ ಭೇಟಿ ನೀಡುವುದಷ್ಟೇ ಸೇರಿದೆ. ದೀರ್ಘ ಪರಿಕ್ರಮದಲ್ಲಿ ನಂದಗಾವ್ ಮತ್ತು ಬರ್ಸಾನಾಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವುದು ಸೇರಿದೆ. ನಾವೆಲ್ಲ ಕೆಲವೇ ದಿನಗಳ ರಜೆಯಲ್ಲಿ ಮಥುರೆಯನ್ನು ಕ್ಷಿಪ್ರವಾಗಿ ನೋಡಿ ಬರುವವರ ಸಾಲಿಗೆ ಸೇರಿದವರು. ಮಥುರಾ ಯಾತ್ರೆಯ ಕುರಿತ ತಮ್ಮ ಅನುಭವಗಳನ್ನು ಪ್ರಿಯಾ ಭಟ್ ಕಲ್ಲಬ್ಬೆ ಅವರು ಇಲ್ಲಿ ದಾಖಲಿಸಿದ್ದಾರೆ. 

Read More

ಅಚಲ ಸೇತು ಬರೆದ ‘ಕೀವೀ ನಾಡಿನ ಪ್ರವಾಸ ಕಥನ’

ಮುಗಿಲು ಮುಟ್ಟುವ ಬಂಡೆಗಳಿಂದ ಧುಮ್ಮಿಕ್ಕುವ ಬಿಳಿಯ ಜಲರಾಶಿಯನ್ನು ನೋಡುತ್ತಾ ಟಾಸ್ಮನ್ ಸಮುದ್ರದವರೆಗೆ ನೌಕಾ ವಿಹಾರ ಮಾಡುತ್ತ ಸಾಗಬಹುದು. ಅಚ್ಚರಿಯ ಸಂಗತಿಯೆಂದರೆ ಖಾರಿಯ ಉಪ್ಪು ನೀರಿನ ಕೆಳ ಪದರದ ಮೇಲೆ ಸುಮಾರು ಹತ್ತು ಅಡಿಗಳಷ್ಟು ಸಿಹಿ ನೀರಿನ ಪದರ ಸದಾ ಕಾಲ ಶೇಖರಣೆಯಾಗಿರುತ್ತದೆ. ಮೇಲಿನ ಮಳೆ ಕಾಡುಗಳಿಂದ ರೆಂಬೆ ಕೊಂಬೆಗಳ ಸಾರವನ್ನು ಹೊತ್ತು ತರುವ ಕಲಗಚ್ಚಿನಂತಹ ಈ…”

Read More

ಹಸಿರು ಕಡಲ ಹೆಣ್ಣಾಮೆಯ ಪ್ರಸವ ಪ್ರಸಂಗ

“ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ