ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಕತೆ
ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್ ತುಂಬಿರುತ್ತಿದ್ದ ಮನಿಷಾ ಹೇರ್ ಆರ್ಟ್ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಕತೆ “ತೇಲ್ ಮಾಲಿಶ್”
